* ಇತಿಹಾಸ ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ ಇತಿಹಾಸ.
* ಇತಿಹಾಸ ಮನುಷ್ಯರು ನಡೆದುಬಂದ ದಾರಿಯನ್ನು ಪರಿಚಯಿಸುತ್ತದೆ.
* ಮಾನವರ ಸಫಲತೆ ಮತ್ತು ವಿಫಲತೆಗಳನ್ನು ವಿವರಿಸುತ್ತದೆ
* ಇತಿಹಾಸವು ಘಟನೆಗಳನ್ನು ವಿವರಿಸುವಾಗ ಕಾಲ ಸ್ಥಳ ಮತ್ತು ವ್ಯಕ್ತಿಯ ಕುರಿತು ನಿರ್ದಿಷ್ಟತೆ ಮತ್ತು ಖಚಿತತೆ ಹೊಂದಿರುತ್ತದೆ
* ಮನುಷ್ಯನಿಗೆ ಸ್ಮರಣಶಕ್ತಿ ಇದ್ದಂತೆ ಒಂದು ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ, ಅಷ್ಟೇ ಏಕೆ ಇಡೀ ಜಗತ್ತಿಗೆ ಇತಿಹಾಸವೇ ಸ್ಮರಣಶಕ್ತಿ
* ಇತಿಹಾಸವನ್ನು ಹೇಗೆ ರಚಿಸಬೇಕು ಎಂಬುದನ್ನು ಜಗತ್ತಿಗೆ ಮೊಟ್ಟಮೊದಲು ತೋರಿಸಿಕೊಟ್ಟವರು - ಗ್ರೀಕ್ ನ ಹೆರೋಡೋಟಸ್
* ಆಧಾರವಿಲ್ಲದೆ ಇತಿಹಾಸವಿಲ್ಲ
* ಇತಿಹಾಸದ ಆಧಾರಗಳಲ್ಲಿ ಎರಡು ವಿಧ ಸಾಹಿತ್ಯ ಆಧಾರಗಳು ಮತ್ತು ಪುರಾತತ್ವ ಆಧಾರಗಳು
* ಸಾಹಿತ್ಯ ಎಂದರೆ ಬರವಣಿಗೆ ಅಥವಾ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಂಗತಿಗಳು
* ಸಾಹಿತ್ಯ ಆಧಾರಗಳಲ್ಲಿ ಎರಡು ವಿಧ ಲಿಖಿತ ಸಾಹಿತ್ಯ ಮತ್ತು ಮೌಖಿಕ ಸಾಹಿತ್ಯ
* ಲಿಖಿತ ಸಾಹಿತ್ಯದಲ್ಲಿ ಎರಡು ವಿಧ ದೇಶಿಯ ಸಾಹಿತ್ಯ ಮತ್ತು ವಿದೇಶಿಯ ಸಾಹಿತ್ಯ
* ಮೌಖಿಕ ಸಾಹಿತ್ಯವು ಜನಪದ ಗೀತೆ, ಕಥೆ ಲಾವಣಿ ಐತಿಹ್ಯ ಮೊದಲಾದವುಗಳನ್ನು ಒಳಗೊಂಡಿರುತ್ತದೆ
* ಲಿಖಿತ ಸಾಹಿತ್ಯ ರಚಿಸುವವರು ಅಕ್ಷರಸ್ಥರಾದರೆ, ಮೌಖಿಕ ಸಾಹಿತ್ಯದ ರಚಿಸುವವರು ಅನಕ್ಷರಸ್ಥರಾಗಿರುತ್ತಾರೆ
* ಹಿಂದಿನ ಮಾನವರು ನಿರ್ಮಿಸಿದ ಮತ್ತು ಬಳಸಿದ ಭೌತಿಕ ವಸ್ತುಗಳ ಅವಶೇಷಗಳೇ ಪುರಾತತ್ವ ಆಧಾರಗಳು
* ಭೂಮಿಯ ಒಳಗೆ ಹುದುಗಿಹೋಗಿರುವ ಅವಶೇಷಗಳನ್ನು ಉತ್ಖನನದ ಮೂಲಕ ಹೊರತೆಗೆಯಲಾಗುವುದು
* ಪುರಾತತ್ವ ಆಧಾರಗಳ ವ್ಯಾಪ್ತಿಗೆ ಮಡಿಕೆ ಚೂರುಗಳು, ನಾಣ್ಯಗಳು, ಶಾಸನಗಳು, ಸ್ಮಾರಕಗಳು ಮತ್ತಿತರ ಅವಶೇಷಗಳು ಒಳಪಡುತ್ತದೆ
* ಉತ್ಖನನ ಎಂದರೆ ಮಾನವನ ಪ್ರಾಚೀನ ಅವಶೇಷ ಮತ್ತು ಪಳೆಯುಳಿಕೆಗಳನ್ನು ಹೊರತೆಗೆಯಲು ನಡೆಸುವ ವೈಜ್ಞಾನಿಕ ಭೂಅಗೆತ
* ಯೂರೋಪಿಯನ್ನರು ಪರಿಚಯಿಸಿದ ಭಾರತ -
* ಭಾರತೀಯರಿಗೆ ಇತಿಹಾಸವು ಪುರಾಣ ಮತ್ತು ಐತಿಹ್ಯಗಳ ಆರೋಪದಲ್ಲಿ ಪ್ರಾಚೀನ ಕಾಲದಿಂದಲೂ ಪರಿಚಯವಿತ್ತು
* ಆದರೆ ಇದು ಯುರೋಪಿಯನ್ನರು ರಚಿಸುವ ಇತಿಹಾಸದ ಮಾದರಿಗಿಂತ ಭಿನ್ನವಾದುದಾಗಿತ್ತು
* ಜೆಸೂಟ್ (jesut)- ಇಗ್ನೇಷಿಯಸ್ ಲಯೋಲ ಎಂಬಾತನು 1534 ರಲ್ಲಿ ಪ್ಯಾರಿಸ್ನಲ್ಲಿ ಜೀಸಸ್ ಸಂಘ ಕಟ್ಟಿದನು
* ಇದು ಪುರುಷ ಕ್ಯಾಥೋಲಿಕ್ ಪಂಥೀಯ ಧರ್ಮಾಸಕ್ತರ ಸಭೆಯಾಗಿತ್ತು
* ಜೀಸಸ್ ಸಂಘದ ಸದಸ್ಯರು ಜೆಸ್ಯೂಟ್ ಗಳು
* 16ನೇ ಶತಮಾನದ ನಂತರ ಭಾರತಕ್ಕೆ ಬಂದ ಯುರೋಪಿಯನ್ನರಲ್ಲಿ ಕೆಲವು ಜೆಸೂಟ್ ಪಾದ್ರಿಗಳಿದ್ದರು
* ಜೆಸೂಟ್ ಪಾದ್ರಿಗಳು ಭಾರತೀಯರ ಜೀವನಕ್ರಮವನ್ನು ಅರ್ಥಮಾಡಿಕೊಳ್ಳಲು ವ್ಯವಸ್ಥಿತ ಅಧ್ಯಯನ ಕೈಗೊಂಡರು *
* ಅಗ್ರಾದಲ್ಲಿ ನೆಲೆಸಿದ್ದ ಹೆನ್ರಿಚ್ ರೋಥ್ ಎಂಬಾತನು ಇಂದಿಗೆ 350 ವರ್ಷಗಳ ಹಿಂದೆ ಸಂಸ್ಕೃತ ವ್ಯಾಕರಣವನ್ನು ಮೊದಲ ಬಾರಿಗೆ ಲ್ಯಾಟಿನ್ ಭಾಷೆಯಲ್ಲಿ ಬರೆದನು
* ಫಾದರ್ ಕಾರ್ಡಾಕ್ಸ್ ನು ಸಂಸ್ಕೃತ ಮತ್ತು ಯುರೋಪಿನ ಭಾಷೆಗಳ ನಡುವೆ ಸಂಬಂಧವಿದೆ ಎಂಬುದನ್ನು ಮೊದಲ ಬಾರಿಗೆ ಗುರುತಿಸಿದನು
* ಇದೇ ಹೊತ್ತಿಗೆ ಬ್ರಿಟಿಷರಿಗೆ ಬಂಗಾಳದ ದಿವಾನಿ ಹಕ್ಕು ದೊರಕಿತ್ತು ಆದ್ದರಿಂದ ಬ್ರಿಟಿಷ್ ಅಧಿಕಾರಿಗಳು ಭಾರತೀಯರೊಂದಿಗೆ ವ್ಯವಹರಿಸುವ ಸಲುವಾಗಿ ಭಾರತೀಯರ ಇತಿಹಾಸ ಸಂಪ್ರದಾಯ ನಂಬಿಕೆ ಕಾನೂನುಗಳನ್ನು ಅರ್ಥ ಮಾಡಿಕೊಳ್ಳಲು ಮುಂದಾದ ಹಲವು ಆಡಳಿತಗಾರರು ಸಾಹಿತ್ಯ ಮತ್ತು ಸಂಸ್ಕೃತಿಯ ಕಡೆಗೆ ಆಕರ್ಷಿತರಾದರು
* ಪರಿಣಾಮವಾಗಿ ಮನುಸ್ಮೃತಿ, ಭಗವದ್ಗೀತೆ ಮೊದಲಾದ ಅಭಿಜಾತ ಸಾಹಿತ್ಯ ಕೃತಿಗಳು ಇಂಗ್ಲಿಷ್ ಗೆ ಅನುವಾದಗೊಂಡವು
* ವಿಲಿಯಂ ಜೋನ್ಸ್ -
* ಭಾರತೀಯ ಶಾಸ್ತ್ರದ (ಇಂಡಾಲಜಿ) ಅಧ್ಯಯನಕ್ಕೆ ಮಹತ್ವದ ಹೆಜ್ಜೆಯಿಟ್ಟ ಬ್ರಿಟಿಷ್ ಅಧಿಕಾರಿ - ಸರ್ ವಿಲಿಯಂ ಜೋನ್ಸ್
* ಬಂಗಾಳದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದನು
* 1784 ರಲ್ಲಿ ದಿ ಏಷ್ಯಾಟಿಕ್ ಸೊಸೈಟಿ ಎಂಬ ಸಂಸ್ಥೆಯನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದ
* ಗೀತ ಗೋವಿಂದ, ಮಾನವ ಧರ್ಮಶಾಸ್ತ್ರ, ಕಾಳಿದಾಸನ ಶಾಕುಂತಲ ನಾಟಕಗಳನ್ನು ಸಂಸ್ಕೃತದಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಿದನು
* ಮ್ಯಾಕ್ಸ್ ಮುಲ್ಲರ್ - *ಪ್ರಮುಖ ಪೌರಾತ್ಯಾವಾದಿ ಮತ್ತು ಭಾರತೀಯ ಶಾಸ್ತ್ರಜ್ಞ
* ಜರ್ಮನ್ ದೇಶದವರು * ಕೃತಿ- ಸೇಕ್ರೆಡ್ ಬುಕ್ ಆಫ್ ದಿ ಹೆಸರಿನ 50 ಸಂಪುಟಗಳನ್ನು ತಂದರು
* ಜೇಮ್ಸ್ ಮಿಲ್ - ಸ್ಕಾಟ್ಲ್ಯಾಂಡ್ ಇತಿಹಾಸಕಾರ * ಉಪಯುಕ್ತವಾದಿಗಳ ಗುಂಪಿಗೆ ಸೇರುತ್ತಾರೆ *
* ಹಿಸ್ಟರಿ ಆಫ್ ಇಂಡಿಯಾ ಹೆಸರಿನಲ್ಲಿ 6 ಸಂಪುಟಗಳ ಭಾರತ ಇತಿಹಾಸ ರಚಿಸಿದರು
* ಆದರೆ ಮ್ಯಾಕ್ಸ್ ಮುಲ್ಲರ್ ಆಗಲಿ ಜೇಮ್ಸ್ ಮಿಲ್ ಆಗಲಿ ಎಂದು ಭಾರತಕ್ಕೆ ಬಂದವರಲ್ಲ
* ಅಬೆ ಡುಬಾಯ್ಸ್ - ಫ್ರೆಂಚ್ ಮಿಷನರಿ
* ಶ್ರೀರಂಗಪಟ್ಟಣ ಬಳಿಯ ಗಂಜಾಂಗೆ ಬಂದು ನೆಲೆಸಿದರು
* ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸಂನ್ಯಾಸಿಯಂತೆ ಬದುಕಿದ ಇವರನ್ನು ಜನರು ದೊಡ್ಡ ಸ್ವಾಮಿಯವರು ಎಂದು
ಕರೆಯುತ್ತಿದ್ದರು
* ಹಿಂದೂ ಮ್ಯಾನೆರ್ಸ್ ಕಸ್ಟಮ್ಸ್ ಸೆರೆಮನಿಸ್ ಎಂಬ ಕೃತಿ ಬರೆದವರು
* ಇದರಲ್ಲಿ ಭಾರತೀಯರ ಆಚಾರ-ವಿಚಾರ ಹಬ್ಬಹರಿದಿನ ವರ್ಣಾಶ್ರಮ ವ್ಯವಸ್ಥೆ ಮೊದಲಾದವುಗಳನ್ನು ಕುರಿತು ಬರೆದಿದ್ದಾರೆ
* 24 ವರ್ಷ ಕಾಲ ಇಲ್ಲಿಯೇ ನೆಲೆಸಿದ್ದು ಅನಂತರ ಫ್ರಾನ್ಸಿಗೆ ಹಿಂದಿರುಗಿದರು
* ಇವರಲ್ಲದೆ ಎಲ್ಫಿನ್ ಸ್ಟನ್, ಕೋಲ್ ಬ್ರೂಕ್, ಕನ್ನಿಂಗ್ಹ್ಯಾಮ್, ಇಲಿಯಟ್, ಡಾಸನ್ ಮುಂತಾದವರು ಭಾರತದ ಚರಿತ್ರೆಯ ವಿವಿಧ
ಘಟ್ಟಗಳನ್ನು ಪರಿಚಯಿಸಿದ್ದಾರೆ
* ಫ್ರಾನ್ಸಿಸ್ ಬುಕನಾನ್, ಕರ್ನಲ್ ವಿಲ್ಕ್ಸ್, ಮೆಕೆಂಜಿ, ಬಿ ಎಲ್ ರೈಸ್, ಪ್ಲೀಟ್ ಮುಂತಾದವರು ನಾಟಕದ ಚರಿತ್ರೆಯ ರಚನೆಗೆ
ಅಮೂಲ್ಯ ಆಧಾರಗಳಾದ ಶಾಸನಗಳು, ಕೈಫಿಯತ್ತುಗಳು, ಹಸ್ತಪ್ರತಿಗಳು, ಬಕೈರುಗಳು ಮೊದಲಾದವುಗಳನ್ನು ಸಂಗ್ರಹಿಸುವಲ್ಲಿ ಮತ್ತು
ಸಂಗತಿಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ
* ಭಾರತೀಯರಿಗೆ ಹೊಸ ಮಾದರಿ ಚರಿತ್ರೆ ನೋಡುವ ಮತ್ತು ಕಟ್ಟುವ ಕ್ರಮವನ್ನು ಯುರೋಪಿಯನ್ನರು ಕಲಿಸುವಲ್ಲಿ ಸಫಲರಾದರು
* ಯುರೋಪಿಯನ್ನರು ಭಾರತೀಯರ ಆಲೋಚನಾ ಕ್ರಮವನ್ನೇ ಬದಲಿಸಿದರು
* ಪೌರಾತ್ಯವಾದಿಗಳು (Orientalists)- ಪೂರ್ವ ದೇಶಗಳ ಇತಿಹಾಸ, ಸಂಸ್ಕೃತಿ, ಆಧ್ಯಾತ್ಮ ಮುಂತಾದವುಗಳ ಬಗ್ಗೆ ಒಲವುಳ್ಳ ಯುರೋಪಿನ ವಿದ್ವಾಂಸರು