* ಪತ್ತೆ ಹಚ್ಚಿದ್ದು - ಕನ್ನಿಂಗ್ ಹ್ಯಾಂ
* ಈಸ್ಟ್ ಇಂಡಿಯಾ ಕಂಪನಿಯ ಸೇವೆಯಲ್ಲಿದ್ದ ಚಾರ್ಲ್ಸ್ ಮ್ಯಾಸನ್ (Charles Masson) ಮೊದಲ ಬಾರಿಗೆ 1826 ರಲ್ಲಿ ಹರಪ್ಪ ನೆಲೆಗೆ ಭೇಟಿ ನೀಡಿದ, ಆತ ಅದನ್ನು ಅಲೆಕ್ಸಾಂಡರ್ ಪುರೂರವನನ್ನು 2300 ವರ್ಷಗಳ ಹಿಂದೆ ಸೋಲಿಸಿದ ಸ್ಥಳ ಎಂದು ಭಾವಿಸಿದ್ದನು.
* ಚಾರ್ಲ್ಸ್ ಮ್ಯಾಸನ್ ಹರಪ್ಪನ ನೆಲೆಯನ್ನು ಗುರುತಿಸಿದ ಮೊದಲಿಗನಾದರು ತಪ್ಪಾದ ನಿರ್ಣಯ ಮಾಡಿದ್ದನು.
* ಒಂದು ಶತಮಾನದ ಹಿಂದಿನವರೆಗೂ ಭಾರತದ ಚರಿತ್ರೆಯನ್ನು ವೇದಗಳ ಕಾಲದಿಂದ ಅಧ್ಯಯನ ಮಾಡಲಾಗುತ್ತಿತ್ತು.
* ಹರಪ್ಪ- ರಾವಿ ನದಿಯ ಎಡ ದಂಡೆ ಮೇಲಿದೆ - ಪತ್ತೆಹಚ್ಚಿದವರು ದಯಾರಾಮ್ ಸಹಾನಿ -1920-21
* ಮೆಹೆಂಜೋದಾರೋ - R.D.ಬ್ಯಾನರ್ಜಿ (ರಖಲ್ ದಾಸ್ ಬ್ಯಾನರ್ಜಿ) -1922
* ಮೊದಲ ಲೇಖನ - ಇಲುಸ್ಟ್ರೇಟೆಡ್ ಪತ್ರಿಕೆಯಲ್ಲಿ ಪ್ರಕಟ
* ಹರಪ್ಪ ನಾಗರಿಕತೆಯ ಶೋಧವು ಭಾರತದ ಇತಿಹಾಸವನ್ನು ವೇದಗಳಿಗೂ ಸು. 2000 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿತು
* ಆರಂಭದಲ್ಲಿ ಸಿಂಧೂ ಮತ್ತು ಅದರ ಉಪನದಿಗಳು ಬಯಲಿನಲ್ಲಿ ನೆಲೆಗಳು ಪತ್ತೆಯಾಗಿದ್ದರಿಂದ ಸಿಂಧೂ ಬಯಲಿನ ನಾಗರಿಕತೆ ಎಂದು ಕರೆದರು
* ಅಂದಿನಿಂದ ಇಂದಿನವರೆಗೂ ನಡೆದಿರುವ ಶೋಧನೆಗಳಲ್ಲಿ 1500ಕ್ಕೂ ಹೆಚ್ಚು ನೆಲೆಗಳು ಕಂಡುಬಂದಿವೆ
* ಪರಿಣಾಮವಾಗಿ ಸಿಂಧೂ ಬಯಲಿನ ಆಚೆಗೂ ನೆಲೆಗಳು ಕಂಡುಬಂದಿದ್ದರಿಂದ ಸಿಂಧೂ ನಾಗರಿಕತೆ ಎನ್ನುವ ಬದಲು ಮೊದಲ ನೆಲೆಯಾದ ಹರಪ್ಪ ಹೆಸರಿನಿಂದ ಹರಪ್ಪ ನಾಗರಿಕತೆ ಎಂದು ಕರೆಯಲಾಗಿದೆ
* 13 ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಪ್ಪ ನಾಗರಿಕತೆಯು ಹರಡಿದೆ
* ಹರಪ್ಪ ನಾಗರಿಕತೆಯ ವ್ಯಾಪ್ತಿ-
* ಪೂರ್ವದಲ್ಲಿ - UPಯ ಅಲಂಗೀರ್
* ಪಶ್ಚಿಮದಲ್ಲಿ - ಬಲೂಚಿಸ್ತಾನದ ಸೂಕ್ತ ಜಂಡರ್
* ಉತ್ತರದಲ್ಲಿ JKದ ಮಾಂಡು
* ದಕ್ಷಿಣದಲ್ಲಿ - MRದ ದೈಮಾಬಾದ್
* ಸಿಂಧೂ ನಾಗರಿಕತೆಯನ್ನು ವಿವಿಧ ಹೆಸರುಗಳಿಂದ ಕರೆದವರು
* ಜಾನ್ ಮಾರ್ಷಲ್ - ಹರಪ್ಪ ನಾಗರಿಕತೆ
* ವಿ.ಎ.ಸ್ಮಿತ್ - ಇಂಡೋ ಸುಮೇರಿಯನ್ ನಾಗರಿಕತೆ
* R.D.ಬ್ಯಾನರ್ಜಿ - ಇಂಡೋ ಕ್ರಿಪ್ಟಾನ್ ನಾಗರಿಕತೆ
* ನಗರಗಳು -
* ಪಾಕಿಸ್ತಾನದಲ್ಲಿ - ಹರಪ್ಪ, ಮೆಹೆಂಜೋದಾರೊ
* ಭಾರತದಲ್ಲಿ - ರಾಜಸ್ಥಾನದ ಕಾಲಿಬಂಗನ್, ಗುಜರಾತಿನ ಲೋಥಾಲ್, ಗುಜರಾತಿನ ದೋಲವೀರ, ಹರಿಯಾಣದ ರಾಖಿಘರಿ
* ನಗರ ಯೋಜನೆ-
* ಹರಪ್ಪ ನಾಗರಿಕತೆಯ ನಗರಗಳು ಯೋಜನಾಬದ್ಧವಾಗಿ ನಿರ್ಮಾಣಗೊಂಡಿದ್ದವು
* ನಗರಗಳ ರಕ್ಷಣೆಗಾಗಿ ಕೋಟೆಗಳನ್ನು ಕಟ್ಟಲಾಗಿತ್ತು
* ಹರಪ್ಪ ನಗರಗಳ ವಿಶೇಷ ಲಕ್ಷಣಗಳು - ಅಗಲವಾದ ರಸ್ತೆಗಳು, ಸಾರ್ವಜನಿಕ ಬಾವಿಗಳು, ಉಪ್ಪರಿಗೆಯ ಮನೆಗಳು, ಅಚ್ಚುಕಟ್ಟಾದ ಒಳಚರಂಡಿ ವ್ಯವಸ್ಥೆ
* ಒಳಚರಂಡಿ ವ್ಯವಸ್ಥೆ ನಮ್ಮ ಪ್ರಾಚೀನರ ಅಪೂರ್ವ ಸಾಧನೆ
* ಸ್ವಚ್ಛತೆಗೆ ನೀಡಿರುವ ಆದ್ಯತೆಯ ಇಂದಿಗೂ ಮಾದರಿಯಾಗಿದೆ
* ಹರಪ್ಪ ನಗರ ಯೋಜನೆ ವ್ಯವಸ್ಥೆಯನ್ನು ದಿನ ಬೇರೆ ಯಾವ ಪ್ರಾಚೀನ ನಾಗರಿಕತೆಯನ್ನು ಕಾಣಲಾರೆವು
* ಮೊಹೆಂಜೋದಾರೋ ನಗರದಲ್ಲಿ ಸಾರ್ವಜನಿಕ ಸ್ನಾನಗೃಹವಿದ್ದು, ಅದರ ಸುತ್ತಲೂ ಕೊಠಡಿಗಳಿವೆ
* ಹರಪ್ಪದಲ್ಲಿ 6 ಕಣಜಗಳಿದ್ದು ಸಮೀಪದಲ್ಲಿ ಕಾರ್ಮಿಕರ ಮನೆಗಳಿವೆ
* ಆರ್ಥಿಕ ಜೀವನ - * ಪ್ರಮುಖ ಕಸುಬುಗಳು- ಹತ್ತಿ & ಉಣ್ಣೆ ಬಟ್ಟೆ ನೂಲುವುದು, ಸುಟ್ಟ ಇಟ್ಟಿಗೆಗಳ ತಯಾರಿಕೆ, ಪಶುಪಾಲನೆ
* ಎತ್ತು, ಕೋಣ, ಆಡು, ಕುರಿ, ಬೆಕ್ಕು, ನಾಯಿ, ಹಂದಿ, ಒಂಟೆ, ಕತ್ತೆಗಳನ್ನು ಸಾಕುತ್ತಿದ್ದರು
* ಜಗತ್ತಿನಲ್ಲಿ ಮೊದಲ ಬಾರಿಗೆ ಹತ್ತಿಯನ್ನು ಬೆಳೆದ ದೇಶ - ಭಾರತ
* ಸಿಂಧೂ ಪ್ರದೇಶದಿಂದ ಉತ್ಪಾದಿಸಲಾಗುತ್ತಿದ್ದ ಕಾರಣ ಹತ್ತಿಯನ್ನು ಗ್ರೀಕ್ ಭಾಷೆಯಲ್ಲಿ ಸಿಂಧೂನ್ ಎಂದು ಕರೆಯುತ್ತಿದ್ದರು
* ಮೆಸಪಟೋಮಿಯನ್ನರು ಹರಪ್ಪ ನಾಗರಿಕತೆಯನ್ನು ಮೆಲುಹ ಎಂದು ಕರೆಯುತ್ತಿದ್ದರು
* ಲೋಥಾಲ್ ಬಂದರಿನ ಮೂಲಕ ಅರಬ್ಬಿ ಸಮುದ್ರ ಮಾರ್ಗದಲ್ಲಿ ವ್ಯಾಪಾರ ನಡೆಸುತ್ತಿದ್ದರು
* ಹರಪ್ಪ ನಾಗರಿಕತೆಯ ಜನರು ಬಳಸುತ್ತಿದ್ದ ಚಿನ್ನವು ಕೋಲಾರದ ಚಿನ್ನದ ಗಣಿಯಿಂದ ಪೂರೈಕೆ ಆಗುತ್ತಿತ್ತು
* ಸಾಮಾಜಿಕ ಜೀವನ -
* ಹರಪ್ಪ ನಾಗರಿಕತೆಯಲ್ಲಿ ಸ್ತ್ರೀ-ಪುರುಷರಿಬ್ಬರೂ ಅಲಂಕಾರ ಪ್ರಿಯರಾಗಿದ್ದರು
* ಸ್ತ್ರೀಯರು ಅನೇಕ ವಿಧದ ಕಂಠೀಹಾರ, ಬಳೆ, ಉಂಗುರ, ಕಿವಿಯ ಓಲೆ, ಸೊಂಟಪಟ್ಟಿ, ಕಾಲಿನ ಕಡಗ (ನೂಪುರ) ಗಳು ಮೊದಲಾದ ಆಭರಣಗಳನ್ನು ಧರಿಸುತ್ತಿದ್ದರು
* ಕಾಂತಿ ವರ್ಧಕಗಳನ್ನು ಬಳಸುತ್ತಿದ್ದರು
* ಸುಗಂಧ ದ್ರವ್ಯಗಳ ಬಳಕೆ ಅವರಿಗೆ ತಿಳಿದಿತ್ತು
* ಸ್ತ್ರೀಯರಷ್ಟೇ ಪುರುಷರು ಕೂಡ ಅಲಂಕಾರ ಪ್ರಿಯರು
* ಗೋಲಿ ಚೆಂಡು ಮತ್ತು ಪಗಡೆ ಅವರ ಆಟಗಳಾಗಿದ್ದವು
* ಗೂಳಿ ಕಾಳಗ ಜನರ ಮನೋರಂಜನೆಯ ಕ್ರೀಡೆಯಾಗಿತ್ತು
* ಕಲೆ -
* ಅವಶೇಷಗಳ ಪೈಕಿ ಜೇಡಿ ಮಣ್ಣಿನ ಮಾತೃ ದೇವತೆಗಳ ಚಿಕ್ಕ ಮೂರ್ತಿಗಳು ಭಾರಿ ಸಂಖ್ಯೆಯಲ್ಲಿ ದೊರಕಿವೆ
* ಮಕ್ಕಳಿಗಾಗಿ ಆಟಿಕೆಯನ್ನು ಎತ್ತಿನ ಬಂಡಿ ಹಾಗೂ ಗೊಂಬೆಗಳಿದ್ದವು
* ಸು. 2000ಕ್ಕೂ ಹೆಚ್ಚು ಮುದ್ರೆಗಳು ಸಿಕ್ಕಿವೆ
* ಧಾರ್ಮಿಕ ಜೀವನ -
* ಹರಪ್ಪನ್ನರು ಪಶುಪತಿ (ಶಿವ) & ಮಾತೃ ದೇವತೆಯನ್ನು ಪೂಜಿಸುತ್ತಿದ್ದರು
* ಅಶ್ವತ ಮರ, ಸೂರ್ಯ, ಭೂಮಿ, ಜಲ, ನಾಗರಹಾವು ಗಳನ್ನು ಆರಾಧಿಸುತ್ತಿದ್ದರು
* ಕಾಲಿಬಂಗನ್ ಮತ್ತು ಲೋಥಾಲ್ ಮುಂತಾದ ನಗರಗಳಲ್ಲಿ ಬೆಂಕಿಯ ಕುಂಡಗಳು ಕಂಡುಬಂದಿವೆ
* ಲಿಪಿ -
* ಹರಪ್ಪ ಜನರು ತಮ್ಮದೇ ಆದ ಲಿಪಿ ಮತ್ತು ಭಾಷೆಯನ್ನು ಬಳಸುತ್ತಿದ್ದರು
* ಹರಪ್ಪ ಲಿಪಿಯನ್ನು ಅರ್ಥೈಸುವುದು ಇನ್ನೂ ಸಾಧ್ಯವಾಗಿಲ್ಲ
* ನಗರಗಳ ಅವನತಿಗೆ ಕಾರಣಗಳು -
* ಸಿಂಧೂ ಮತ್ತು ಅದರ ಉಪನದಿಗಳಲ್ಲಿ ಆಗಾಗ ಉಂಟಾಗುತ್ತಿದ್ದ ನೆರೆಹಾವಳಿಗಳು
* ಇಟ್ಟಿಗೆಗಳನ್ನು ಸುಡಲು ಮರಮುಟ್ಟುಗಳ ಅತಿಯಾದ ಬಳಕೆಯಿಂದ ಕಾಡುಗಳ ನಾಶ & ಇದರ ಪರಿಣಾಮವಾಗಿ ಜನರ ವಲಸೆ
* ಹೊರಗಿನಿಂದ ಬಂದ ಆರ್ಯರು ಹರಪ್ಪನ್ನರ ಮೇಲೆ ನಡೆಸಿರಬಹುದಾದ ಆಕ್ರಮಣ
* ಸಾಂಕ್ರಾಮಿಕ ರೋಗದ ಪ್ರಸಾರ
* ಅವಶೇಷಗಳು & ದೊರೆತ ಸ್ಥಳಗಳು-
* ಕಾಲಿಬಂಗನ್ - ನೆಲಹಾಸಿಗೆ, ಒಂಟೆ
* ಮೆಹೆಂಜೋ - ಇಟ್ಟಿಗೆ ಭಟ್ಟಿ, ಗಡ್ಡದಮನುಷ್ಯ, ಸಭಾಭವನ, ಸ್ತ್ರೀ, ಮಾತೃ ದೇವತೆ, ಪಶುಪತಿ, ಈಜುಕೊಳ (ಜಾನ್ ಮಾರ್ಷಲ್), ಶವಪೆಟ್ಟಿಗೆ
* ಉಗ್ರಾಣ, ಕೊಡಲಿ- ಹರಪ್ಪ, ಮೆಹೆಂಜೋ, ಲೋಥಲ್
* ಬೆಂಕಿಯಿಂದ ನಾಶವಾದ ನಗರ - ಕೊಡವಾಜಿ
* ಚರಂಡಿ ಇಲ್ಲದ ನಗರ - ಚಾನುದಾರೋ
* ಕಲ್ಲಂಗಡಿ-ಹರಪ್ಪ
* ಖರ್ಜೂರ, ಹತ್ತಿ -ಮೆಹೆಂಜೋ
* ರಾಗಿ-ರಂಗಪುರ
* ಭತ್ತ, ತಾಮ್ರದ ಕನ್ನಡಿ, ನರಿ, ಗಾಲಿ-ಲೋಥಾಲ್
* ಸ್ಕೇಲ್-ಮೆಹೆಂಜೋ, ಲೋಥಲ್
* ನೇಗಿಲು-ಕಾಲಿಬಂಗನ್
* ನಾಯಿ - ಮಾಂಡು
* ಮರ-ಅರಳಿ
* ಪ್ರಾಣಿ-ಗೂಳಿ
* ಪಕ್ಷಿ-ಪಾರಿವಾಳ
* ಯಜ್ಞಕುಂಡ-ಕಾಲಬಂಗನ್, ಲೋಥಾಲ್
* ವಿದೇಶಿ ವ್ಯಾಪಾರ-ಸೂಕ್ತಜೆಂಡರ್, ಲೋಥಲ್,ಬಾಲಸುರ್
* ಮೆಸಪೊಟೇಮಿಯಾ- ಮೆಲುಹ (ಫಲವತ್ತಾದ ಭೂಮಿ ಉಳ್ಳವರು)
* ಕುದುರೆ-ಸುರ್ ಕೋಟ್
*ಜಿಂಕೆ-ಆಂಮ್ರಿ
* ದೊಡ್ಡ ನೆಲೆ - ಮೆಹೆಂಜೋದಾರೋ (ಲರ್ಖಾನ್ ಜಿಲ್ಲೆ)